ನೀವು ಇನ್ನೂ ಎರಡು ಬೆರಳುಗಳನ್ನು ಬಳಸಿ ಟೈಪ್ ಮಾಡುತ್ತಿದ್ದೀರಾ? ಪ್ರತೀ ಸ್ಟ್ರೋಕಿಗೆ ಮೊದಲು ಕೀಬೋರ್ಡ್ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆಯೆ?
Touch Typing Study ಒಂದು ಉಚಿತವಾದ, ಬಳಕೆದಾರ ಸ್ನೇಹಿ ಕಲಿಕೆಯ ವೆಬ್ ಸೈಟ್ ಆಗಿದ್ದ್ದು, ನಿಮ್ಮ ಟೈಪಿಂಗ್ ವೇಗ ಮತ್ತು ನಿಖರತೆಯನ್ನು ಸುಧಾರಿಸಲು ಸಹಾಯ ಸಾಧ್ಯ ಆಗುವಂತೆ ಅದನ್ನು ವಿನ್ಯಾಸ ಮಾಡಲಾಗಿದೆ.
ಒಮ್ಮೆ ನೀವು ಟಚ್ ಟೈಪ್ ಬಳಸಲಾರಂಭಿಸಿದರೆ ನೀವು ಟೈಪ್ ಮಾಡಬಯಸುವ ಅಕ್ಷರಗಳಿಗಾಗಿ ಕೀಬೋರ್ಡ್ ನೋಡುವ ಅಗತ್ಯವಿರುವುದಿಲ್ಲ ಮತ್ತು ನೀವು ಹೆಚ್ಚು ವೇಗವಾಗಿ ಟೈಪ್ ಮಾಡಬಹುದು!
Touch typing ಕಣ್ಣಿನ ದೃಷ್ಟಿಯ ಬದಲು ಸ್ನಾಯುಗಳ ನೆನಪಿನ ಮೇಲೆ ಆಧಾರಿತ ವಿಧಾನ. ವಿಶೇಷವಾಗಿ ನೀವು ದೃಶ್ಯಮೂಲದ ಪಠ್ಯವನ್ನು ಭಾಷಾಬದಲಾವಣೆಗೆ ಒಳಪಡಿಸಬೇಕಿದ್ದಲ್ಲಿ, ಈ ವಿಧಾನದಲ್ಲಿ ಬಹಳ ವೇಗವಾಗಿ ಡೇಟಾ ಎಂಟ್ರಿ ಸಾಧ್ಯವಿದೆ.
Touch typingವಿಧಾನದಲ್ಲಿ ಟೈಪಿಂಗ್ ಮಾಡುವುದು ನಿಮ್ಮ ಕಂಪ್ಯೂಟರಿನ ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದಲ್ಲದೆ; ಅದು ಡೇಟಾ ಎಂಟ್ರಿಯ ವೇಗವನ್ನು ಹೆಚ್ಚಿಸುತ್ತದೆ ಮತ್ತು, ಸಾಧ್ಯವಿದ್ದಲ್ಲೆಲ್ಲ ನಿಮ್ಮ ಕಣ್ಣಿನ ಆಯಾಸ ಮತ್ತು ಸಂಭಾವ್ಯ ಹಾನಿಗಳನ್ನು ಕಡಿಮೆಗೊಳಿಸುತ್ತದೆ.
Touch Typing ಅಧ್ಯಯನದಲ್ಲಿ 15 ಪಾಠಗಳಿದ್ದು, ಒಂದು ವೇಗ ಪರೀಕ್ಷೆ ಮತ್ತು ನೀವು ಹಂತಹಂತವಾಗಿ ಕಲಿಯಲು ಅನುವು ಮಾಡೀಕೊಡುವ ಆಟಗಳಿದ್ದು, ನಿಮ್ಮ ಮುನ್ನಡೆಯ ಮೇಲೆ ನೀವೇ ನಿಗಾ ಇರಿಸಿಕೊಂಡು ಇದನ್ನು ಎಂಜಾಯ್ ಮಾಡಬಹುದು!