-
ಹೌದು
-
1) ನೀವು ನೋಂದಣಿ ಮಾಡಿಕೊಂಡರೆ, ಒಂದು ಪ್ರಗತಿ ಇತಿಹಾಸದ ಜೊತೆಗೆ ನೀವು ಒಂದು ಪ್ರಗತಿ ಮಾಹಿತಿಯನ್ನು ಪಡೆಯುವಿರಿ.
2) ಒಂದು ಸಣ್ಣ ಕೊಡುಗೆ ನೀಡುವ ಮೂಲಕ ಜಾಹೀರಾತು ರಹಿತವಾಗಿಯೂ ನೀವು ಕಲಿಯಬಹುದು.
-
ನಿಮ್ಮ ಕಡೆಯಿಂದ ಒಂದು ಸಣ್ಣ ಕೊಡುಗೆ ನೀಡಿ, ನಾವು ನಿಮ್ಮ ಖಾತೆಯಿಂದ ಜಾಹೀರಾತುಗಳನ್ನು ತೆಗೆದು ಬಿಡುತ್ತೇವೆ. ದಯವಿಟ್ಟು ತಾಳ್ಮೆಯಿಂದ ಇರಿ, ಯಾಕೆಂದರೆ ಇದು ಮ್ಯಾನ್ಯುವಲ್ ಪ್ರಕ್ರಿಯೆ.
-
ನಿಮ್ಮಿಂದ ಈ ರೀತಿಯಲ್ಲಿ ಸಹಾಯ ಆಗಬಹುದು-1) ನಿಮ್ಮ ಲೈಕ್ ಮತ್ತು ಡಿಸ್ಲೈಕ್ ಕಮೆಂಟ್ ಮೂಲಕ
2)ಕಲಿಕೆಯ ಅನುಭವವನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂಬ ಬಗೆಗಿನ ನಿಮ್ಮ ಆಲೋಚನಾ ವಿಧಾನಗಳನ್ನು (ಅಥವಾ ಖಂಡಿತವಾಗಿಯೂ ಇನ್ನಿತರ ವಿಚಾರಗಳ ಬಗ್ಗೆ) ಬರೆಯುವ ಮೂಲಕ
3) ನಿಮ್ಮ ಸ್ನೇಹಿತರಿಗೆ ನಮ್ಮ ಬಗ್ಗ ಹೇಳುವ ಮೂಲಕ (ಸಾಮಾಜಕ ಜಾಲತಾಣಗಳಲ್ಲಿ ನಮ್ಮ ವೆಬ್ ಸೈಟ್ ಅನ್ನು ಹಂಚಿಕೊಂಡು https://www.facebook.com/TouchTypingStudy) ನಲ್ಲಿ ನಮ್ಮನ್ನು ಸೇರುವ ಮೂಲಕ.
-
touch-type ಅನ್ನು ಕಲಿಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಅನ್ನುವುದು ನಿಮ್ಮ ಮೇಲೆ ಅವಲಂಬಿಸಿರುತ್ತದೆ. ನಿಯಮಿತವಾಗಿ ಅಭ್ಯಾಸ ಮಾಡುವುದು ಬಹಳ ಮುಖ್ಯ. ಒಳ್ಳೆಯ ಫಲಿತಾಂಶಕ್ಕಾಗಿ, ಪ್ರತಿ ದಿನ ಕನಿಷ್ಠ ಒಂದು ಪಾಠವನ್ನಾದರೂ ಕಲಿಯಬೇಕೆಂಬುದು ನಮ್ಮ ಸಲಹೆ.
ನೆನಪಿಡಿ, ಎಲ್ಲಾ ಅಕ್ಷರಗಳೂ ತಿಳಿದಿವೆ ಅಂದ ಮಾತ್ರಕ್ಕೆ ನೀವು ವೇಗದ ಟೈಪಿಂಗಿಗೆ ತಯಾರಾಗಿದ್ದೀರಿ ಎಂದು ಅದರ ಅರ್ಥ ಅಲ್ಲ. ಕೀಲಿಗಳು ನಿರ್ದಿಷ್ಟವಾಗಿ ಎಲ್ಲಿ ಇವೆ ಎಂಬ ಬಗ್ಗೆ ಯೋಚನೆ ಮಾಡದೆ ಅಥವಾ ಕೀಬೋರ್ಡ್ ಕಡೆಗೆ ನೋಡದೆ ಟೈಪ್ ಮಾಡಲು ಸಾಧ್ಯವಾಗುವ “ಸ್ನಾಯು ಚಲನಾ ನೆನಪು” ಎಂದು ಕರೆಯಲಾಗುವ ಆವಶ್ಯಕ ಚಲನಾ ಶೈಲಿಗಳನ್ನು ನಿಮ್ಮ ಬೆರಳುಗಳು ಬೆಳೆಸಿಕೊಳ್ಳುವುದು ಆವಶ್ಯಕ. ಅನೇಕ ಬಾರಿ ಪುನರಾವರ್ತಿಸಿದರೆ ಮಾತ್ರವೇ ಸ್ವಯಂ ಚಾಲಿತ ಚಲನೆಗಳು ಉತ್ತಮಗೊಳ್ಳುತ್ತವೆ. ನೆನಪಿಡಿ – ಅಭ್ಯಾಸದಿಂದ ಮಾತ್ರವೇ ಪರಿಪೂರ್ಣತೆ ಸಾಧ್ಯ – ಇನ್ನೇನೂ ಅಲ್ಲ!
-
WPM ಅನ್ನು ಮಾಪನ ಮಾಡಲು, ನೀವು ಪ್ರತೀ ನಿಮಿಷಕ್ಕೆ ಎಷ್ಟು ಪದಗಳನ್ನು ಟೈಪ್ ಮಾಡಿದ್ದೀರಿ ಎಂದು ಪ್ರೋಗ್ರಾಂ ಲೆಕ್ಕ ಹಾಕುತ್ತದೆ: ಸ್ಪೇಸ್ ಮತ್ತು ವಿರಾಮ ಸೇರಿಸಿ, 1 ಪದ = 5 ಅಕ್ಷರಗಳು.
-
ತಾಂತ್ರಿಕವಾಗಿ ನಿಮಗೆ ಆವಶ್ಯಕತೆ ಇರುವುದು ಇಂಟರ್ನೆಟ್ ಸಂಪರ್ಕ ಮಾತ್ರ. ಆದರೆ, ನಿಮ್ಮ touch typing ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ನಿಮ್ಮಲ್ಲಿ ಪ್ರೇರಣೆ ಮತ್ತು ಸಂಕಲ್ಪ ಶಕ್ತಿ ಇರಬೇಕಾದುದೂ ಸಹ ಆವಶ್ಯಕ.
-
ನೀವು ಟೈಪಿಂಗ್ ಅನ್ನು ಶುರು ಮಾಡುವಾಗ ಕ್ಯಾಪ್ಸ್ ಲಾಕ್ ಆನ್ ಆಗಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ಯಾವಾಗ ಕ್ಯಾಪ್ಸ್ ಲಾಕ್ ಆನ್ ಆಗಿರುತ್ತದೆಯೋ ಆಗ ನೀವು ಶಿಫ್ಟ್ ಕೀಲಿಯನ್ನು ಮತ್ತು ಸಂಬಂಧಿತ ಅಕ್ಷರವನ್ನು ಏಕಕಾಲದಲ್ಲಿ ಒತ್ತಬೇಕು ಎಂಬುದಾಗಿ ಪ್ರೋಗ್ರಾಂ ನಿಮ್ಮನ್ನು ಕೇಳಿಕೊಳ್ಳುತ್ತದೆ.
-
ಯಾರು ತಮ್ಮ touch typing ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಬೇಕೆಂದು ಇಚ್ಛಿಸುತ್ತಾರೆಯೋ ಅವರೆಲ್ಲರಿಗಾಗಿ TypingStudy ಇದೆ. touch typing ಅನ್ನುವುದು ಕೀ ಬೋರ್ಡ್ ನೋಡದೆಯೇ ಸರಿಯಾದ ಕೀಲಿಗಳನ್ನು ಟೈಪ್ ಮಾಡಲು ಸಾಧ್ಯವಾಗಿಸುವ ಕೌಶಲ್ಯ.
-
ಹೌದು, ಡಿಸ್ಲೆಕ್ಸಿಯಾ ಇರುವ ಜನರಿಗೂ ಕೂಡ Typing Study ಯೋಗ್ಯವಾಗಿದೆ. ಡಿಸ್ಲೆಕ್ಸಿಯಾ ಇರುವ, Typing Study ಕೌಶಲ್ಯ ಇರದವರಿಗಿಂತಲೂ Typing Study ಕೌಶಲ್ಯಗಳನ್ನು ತಿಳಿದಿರುವ ವ್ಯಕ್ತಿಗೆ ಇದರಿಂದ ವಿಶೇಷ ಪ್ರಯೋಜನ ಇದೆ. (ಡಿಸ್ಲೆಕ್ಸಿಯಾ ಇರುವ ಕೆಲವು ಜನರಿಗೆ ಕೈಬರಹದ ಪಠ್ಯ ಕಷ್ಟವಾಗುವುದರಿಂದ, ವೇಗ ಮತ್ತು ಓದುವಿಕೆಯ ಎರಡೂ ದೃಷ್ಟಿಯಿಂದಲೂ ಅವರಿಗೆ ಟೈಪಿಂಗ್ ಬರವಣಿಗೆಯಿಂದ ವಿಶೇಷ ಪ್ರಯೋಜನವಾಗಬಹುದು). ಪಠ್ಯವನ್ನು ಕಂಪ್ಯೂಟರ್ ಮೇಲೆ ನೋಡಿ ಕಾಗುಣಿತವನ್ನು ಸರಿಪಡಿಸಬಹುದು ಎಂಬ ಕಾರಣಕ್ಕೆ ಇದು ಖಂಡಿತವಾಗಿಯೂ ಪ್ರಯೋಜನಕಾರಿ.